ಹಿಂದಿ ಹೇರಿಕೆ ವಿರೋಧಿ ಹೋರಾಟಕ್ಕೆ 50 ವರುಶಗಳು / 50 years of opposition to Hindi imposition

Facebook link to the event: https://www.facebook.com/events/767514256663331/

1965ರಿಂದ ಹಿಂದೀಯನ್ನು ಮಾತ್ರ ಕೇಂದ್ರ ಸರಕಾರದ ಏಕೈಕ ಅಧಿಕೃತ ಭಾಷೆಯಾಗಿಸುವ ನಿರ್ಧಾರವನ್ನು ಭಾರತದ ಸಂವಿಧಾನ ಬರೆಯುವಾಗ ಕೈಗೊಳ್ಳಲಾಗಿತ್ತು. ಹಿಂದೀಯೇತರ ನುಡಿಸಮುದಾಯಗಳ ವಿರೋಧದ ನಡುವೆಯೂ ಕೇಂದ್ರ ಸರಕಾರವು ಈ ಕೆಲಸಕ್ಕೆ ಮುಂದಾದಾಗ, 1965ರಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ನಡೆದು, ಹಿಂದೀ ಮತ್ತು ಇಂಗ್ಲೀಷ್ ಎರಡನ್ನೂ ಕೇಂದ್ರ ಸರಕಾರದ ಅಧಿಕೃತ ಭಾಷೆಗಳಾಗಿ ಮುಂದುವರೆಸಲು ತೀರ್ಮಾನಿಸಲಾಯಿತು. ಹಿಂದೀ ಹೇರಿಕೆ ವಿರೋಧಿ ಹೋರಾಟಕ್ಕೆ ಇದೇ ಜನವರಿ 25ರಂದು 50 ವರುಶಗಳು ತುಂಬುತ್ತಿದ್ದು, ಈ ಹೊತ್ತಿನಲ್ಲಿ ಹೋರಾಟದ ನೆನಪುಗಳನ್ನು ಮೆಲುಕು ಹಾಕುತ್ತಾ, ಎಲ್ಲಾ ಭಾಷೆಗಳನ್ನೂ ಸಮಾನವೆಂದು ನೋಡುವ ಭಾಷಾನೀತಿಯ ಅವಶ್ಯಕತೆಯ ಬಗ್ಗೆ ಒಂದು ಚರ್ಚೆ ಹಮ್ಮಿಕೊಳ್ಳಲಾಗಿದೆ.

ಹೆಸರಾಂತ ಸಾಹಿತಿ ಮತ್ತು ಹಿಂದಿ ಹೇರಿಕೆ ಬಗ್ಗೆ ಹಲ ವರುಶಗಳಿಂದ ದನಿ ಎತ್ತಿರುವ ಶ್ರೀ ಪಿ.ವಿ. ನಾರಾಯಣ ಅವರು ಈ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. “ಹಿಂದೀ ಹೇರಿಕೆ – ಮೂರು ಮಂತ್ರನೂರು ತಂತ್ರ” ಹೊತ್ತಗೆಯ ಬರಹಗಾರರಾದ ಶ್ರೀ ಆನಂದ್ ಅವರೂ ಈ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

When the constitution of India was adopted, it was decided that Hindi will remain the sole official language of the union government from 1965 onwards. Non-Hindi speaking communities of India resisted this move strongly. Despite the opposition, when the government of India moved towards adopting Hindi as sole official language, large scale protests erupted across India. This January 25th marks the 50th anniversary of these agitations against Hindi imposition. This event is to recall about the protests against Hindi imposition and also discuss about the importance of the need for a language policy that treats all Indian languages as equal.


Mr. P.V. Narayana, a Kannada littérateur, will be speaking at the event. Mr. P.V.Narayana has long been a voice of opposition to Hindi imposition.


Mr. Anand G, author of Kannada book ‘Hindi herike – mooru mantra nooru tantra’ that talks about perils of Hindi imposition, will also be speaking at the event.

Posted on January 16, 2015, in ಕಾರ್ಯಕ್ರಮಗಳು. Bookmark the permalink. Comments Off on ಹಿಂದಿ ಹೇರಿಕೆ ವಿರೋಧಿ ಹೋರಾಟಕ್ಕೆ 50 ವರುಶಗಳು / 50 years of opposition to Hindi imposition.

Comments are closed.

%d bloggers like this: