Category Archives: ಚಿತ್ರಗಳು

ದೆಹಲಿ ಭಾಷಾ ಹಕ್ಕುಗಳ ಬೇಡಿಕೆಗಳು

2016ರ ವಿಶ್ವ ತಾಯ್ನುಡಿ ದಿನದಂದು ಭಾರತದ ಬೇರೆ ಬೇರೆ ನುಡಿ ಸಮುದಾಯಗಳ ಉತ್ಸಾಹಿಗಳು ದೆಹಲಿಯಲ್ಲಿ ಸೇರಿ “ದೆಹಲಿ ಭಾಷಾ ಹಕ್ಕುಗಳ ಬೇಡಿಕೆಗಳು” ಎಂಬ ಕಡತದ ಬಿಡುಗಡೆಗೆ ಸಾಕ್ಷಿಯಾದರು. ಭಾರತದ ಎಲ್ಲಾ ನುಡಿ ಸಮುದಾಯಗಳಿಗೂ ಇರುವ ಸಮಾನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬೆಂಬಲ ಕೋರುವ ಘೋಷಣಾ ಪತ್ರ ಇದಾಗಿದೆ.

ಈ ಕಾರ್ಯಕ್ರಮವನ್ನು ಕ್ಲಿಯರ್/ C.L.E.A.R (Campaign for Language Equality and Rights) ಎಂಬ ಸಂಸ್ಥೆಯು ದೆಹಲಿಯ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿತ್ತು. ಕಡತದ ಬಿಡುಗಡೆಯ ನಂತರ ಪತ್ರಿಕಾ ಗೋಷ್ಠಿಯನ್ನೂ ಆಯೋಜಿಸಲಾಗಿತ್ತು.  ಭಾರತದಾದ್ಯಂತ ಹಲವಾರು ಭಾಷಿಕರು ತಮ್ಮ ನುಡಿಯ ಉಳಿವಿಗಾಗಿ ಜೀವ ತೆತ್ತ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿಯ ದೀಪದ ಮೆರವಣಿಗೆಯನ್ನೂ ಸಂಜೆ ಆಯೋಜಿಸಲಾಗಿತ್ತು.

“ಡೆಲ್ಲಿ ಡಿಮಾಂಡ್ಸ್ ಆಫ಼್ ಲ್ಯಾಂಗ್ವೇಜ್ ರೈಟ್ಸ್” ಕಡತವನ್ನು ಓದಲು ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ:
ದೆಹಲಿ ಭಾಷಾ ಹಕ್ಕುಗಳ ಬೇಡಿಕೆಗಳು

ಕಾರ್ಯಕ್ರಮದ ಕೆಲ ಚಿತ್ರಗಳು ಇಲ್ಲಿವೆ:

This slideshow requires JavaScript.

ಚಿತ್ರಪ್ರದರ್ಶನ : ಭಾರತಕ್ಕೆ ಬೇಕು ಸಮಾನತೆಯ ಭಾಷಾ ನೀತಿ

ಭಾರತ ಒಕ್ಕೂಟದಲ್ಲಿ ಸಮಾನ ಭಾಷಾನೀತಿಯ ಅಗತ್ಯತೆಯನ್ನು ಬಣ್ಣಿಸುವ ಚಿತ್ರಪ್ರದರ್ಶನವೊಂದನ್ನು ಬನವಾಸಿ ಬಳಗವು 2016ರ ಜನವರಿ 24, ಭಾನುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿತ್ತು. ಬೆಳಿಗ್ಗೆ 10.30ರಿಂದ ಸಂಜೆ 3.30ರವರೆಗೆ ನಡೆದ ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಗಳು ಇಲ್ಲಿವೆ.

pic7pic4pic6 pic5 pic8 pic1  pic3pic9

ಚಿತ್ರಪ್ರದರ್ಶನ : ಭಾರತಕ್ಕೆ ಬೇಕು ಸಮಾನತೆಯ ಭಾಷಾ ನೀತಿ

ಭಾರತ ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಗುರುತಿಸಲಾಗಿರುವ ಎಲ್ಲ 22 ಭಾಷೆಗಳನ್ನೂ ಒಕ್ಕೂಟ ಸರಕಾರದ ಅಧಿಕೃತ ಭಾಷೆಗಳನ್ನಾಗಿಸಬೇಕು ಅನ್ನುವ, ಸಮಾನ ಭಾಷಾನೀತಿಗಾಗಿ ಒತ್ತಾಯಿಸುವ ಬಗ್ಗೆ ಬನವಾಸಿ ಬಳಗವು, 2015ರ ಸೆಪ್ಟೆಂಬರ್ 13 ಭಾನುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ಚಿತ್ರಪ್ರದರ್ಶನವೊಂದನ್ನು ಹಮ್ಮಿಕೊಂಡಿತ್ತು. ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆದ ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಗಳು ಇಲ್ಲಿವೆ.

42 63 73 13 23 33

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿಂದಿ ಹೇರಿಕೆಯ ಕುರಿತು ಚಿತ್ರಪ್ರದರ್ಶನ

ಶ್ರವಣಬೆಳಗೊಳದಲ್ಲಿ ಫೆಬ್ರವರಿ 1, 2, 3ರಂದು ಜರುಗಿದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬನವಾಸಿ ಬಳಗದ ವತಿಯಿಂದ ಹಿಂದಿ ಹೇರಿಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಚಿತ್ರಪ್ರದರ್ಶನವೊಂದನ್ನು ಆಯೋಜಿಸಲಾಗಿತ್ತು. ಸಮ್ಮೇಳನದ ಮೂರೂ ದಿನ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಜನರು ಆಸಕ್ತಿಯಿಂದ ಹಿಂದಿ ಹೇರಿಕೆಯ ವಿಷಯಗಳನ್ನು ಕೇಳಿ ತಿಳಿದುಕೊಳ್ಳುತ್ತಾ ಭಾಷಾ ಸಮಾನತೆಗಾಗಿ ಹಕ್ಕೊತ್ತಾಯ ಮಂಡಿಸುವ ಸಹಿ ಅಭಿಯಾನಕ್ಕೆ ಸಹಿ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದರು. ಮಕ್ಕಳು, ಹಿರಿಯರು, ಶಿಕ್ಷಕರು, ಪೊಲೀಸರು, ಸರ್ಕಾರಿ ನೌಕರರು, ರಾಜಕಾರಣಿಗಳು, ಸಾಹಿತಿಗಳು, ಚಿಂತಕರು, ಪತ್ರಕರ್ತರು – ಹೀಗೆ ಹಲವು ವಲಯಗಳ ಜನರು ಚಿತ್ರಪ್ರದರ್ಶನದ ಚಿತ್ರಗಳನ್ನು ನೋಡಿದರು. ನಮ್ಮ ಚಿತ್ರಪ್ರದರ್ಶನದ ಮೂಲಕ ಹಿಂದಿ ಹೇರಿಕೆಯ ವಸ್ತುಸ್ಥಿತಿಯನ್ನು ತಿಳಿಯುತ್ತಾ, ಜನರು ಕೇಂದ್ರ ಸರ್ಕಾರದ ಹಿಂದೀ ಹೇರಿಕೆ ನೀತಿಯನ್ನು ಖಂಡಿಸುತ್ತಿದ್ದುದು ಸಹಜವಾಗಿ ಕಾಣುತ್ತಿತ್ತು. ಸಮ್ಮೇಳನದ ಮೂರನೆಯ ದಿನದ ಕೊನೆಯ ಹೊತ್ತಿಗೆ ಸಹಿ ಸಂಗ್ರಹ ಅಭಿಯಾನಕ್ಕೆ ಒಟ್ಟು ಸುಮಾರು ಆರುನೂರಕ್ಕಿಂತ ಹೆಚ್ಚು ಸಹಿಗಳ ಸೇರ್ಪಡೆಯಾದವು. ಈ ಚಿತ್ರಪ್ರದರ್ಶನದ ಕೆಲ ನೋಟಗಳು ಇಲ್ಲಿವೆ:

 

Side view

ಚಿತ್ರ ಪ್ರದರ್ಶನದ ಒಂದು ನೋಟ

Kum Veerabhadrappa discussing with Anand

ಹೆಸರಾಂತ ಸಾಹಿತಿ ಕುಂ ವೀರಭದ್ರಪ್ಪನವರಿಗೆ “ಹಿಂದಿ ಹೇರಿಕೆ – ಮೂರು ಮಂತ್ರ – ನೂರು ತಂತ್ರ” ಹೊತ್ತಗೆಯ ಬರಹಗಾರರಾದ ಆನಂದ್ ಅವರು ಹಿಂದಿ ಹೇರಿಕೆಯ ಕುರಿತ ಮಾಹಿತಿ ನೀಡುತ್ತಿರುವುದು.

 
Nalluru Prasad signing the petition

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ್ ಅವರು, ಸಮಾನ ಭಾಷಾನೀತಿಗಾಗಿ ಹಕ್ಕೊತ್ತಾಯ ಮಂಡಿಸುವ ಸಹಿ ಅಭಿಯಾನಕ್ಕೆ ಸಹಿ ಮಾಡುತ್ತಿರುವುದುದು

 
People watching exhibition

ಚಿತ್ರ ಪ್ರದರ್ಶನವನ್ನು ನೋಡುತ್ತಿರುವ ಜನ ಸಾಮಾನ್ಯರು

ಹಿಂದೀ ಹೇರಿಕೆ ವಿರೋಧಿ ಹೋರಾಟಕ್ಕೆ 50 ವರುಶಗಳು

ಹಿಂದೀ ಹೇರಿಕೆ ವಿರೋಧಿ ಹೋರಾಟಕ್ಕೆ ಇದೇ 2015ರ ಜನವರಿ 25ಕ್ಕೆ 50 ವರುಶಗಳು ತುಂಬಿದ್ದು, ಈ ಹೋರಾಟದ ನೆನಪುಗಳನ್ನು ಮೆಲುಕು ಹಾಕುತ್ತಾ, ಎಲ್ಲಾ ಭಾಷೆಗಳನ್ನೂ ಸಮಾನವೆಂದು ನೋಡುವ ಭಾಷಾನೀತಿಯ ಅವಶ್ಯಕತೆಯ ಬಗ್ಗೆ ಒಂದು ಚರ್ಚೆ ಹಮ್ಮಿಕೊಳ್ಳಲಾಯಿತು. ಈ ಹಮ್ಮುಗೆಯ ಕೆಲ ಚಿತ್ರಗಳು ಇಲ್ಲಿವೆ.

ಈ ಹಮ್ಮುಗೆಯ ಕುರಿತ ಪತ್ರಿಕಾ ವರದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

10405376_951055798261026_6638231657907209182_n 10942754_951137904919482_409066589715288873_n

10447065_951137734919499_2714680142260767868_n

ಡಾ | ಪಿ.ವಿ.ನಾರಾಯಣ ಅವರು ಹಿಂದೀ ಹೇರಿಕೆಯ ಕುರಿತು ಮಾತನಾಡುತ್ತಿರುವುದು.
10457531_951137791586160_5682615575536902388_n

ಹೆಸರಾಂತ ತಮಿಳು ಕವಿ ಜಯಪ್ರಕಾಸಮ್ ಅವರು, 1965ರಲ್ಲಿ ತಮಿಳುನಾಡಿನಲ್ಲಿ ನಡೆದ ಹಿಂದೀ ಹೇರಿಕೆ ವಿರೋಧಿ ಹೋರಾಟದ ಮೆಲುಕು ಹಾಕುತ್ತಿರುವುದು.

10940518_951137831586156_3174243548307886193_n
ಭಾಷಾನೀತಿ ಹೋರಾಟಗಾರರಾದ ಮಣಿ ಮಣಿವಣ್ಣನ್ ಅವರು ತಮ್ಮ ಚಿಕ್ಕಂದಿನಲ್ಲಿ ಕಂಡ ಹಿಂದೀ ಹೇರಿಕೆ ವಿರೋಧಿ ಹೋರಾಟ ಮತ್ತು ಆ ಹೋರಾಟವನ್ನು ಹತ್ತಿಕ್ಕಿದ ಬಗೆಯನ್ನು ಬಣ್ಣಿಸುತ್ತಿರುವುದು.
 10011445_951137834919489_6020772706620666548_n

“ಹಿಂದೀ ಹೇರಿಕೆ – ಮೂರು ಮಂತ್ರ, ನೂರು ತಂತ್ರ” ಹೊತ್ತಗೆಯ ಬರಹಗಾರರಾದ ಶ್ರೀ ಆನಂದ್ ಅವರು ಭಾಷಿಕ ಹಕ್ಕುಗಳ ಕುರಿತು ಮಾತನಾಡುತ್ತಿರುವುದು. 

 –

ಸೆಪ್ಟೆಂಬರ್ ಹದಿನಾಲ್ಕು 2014ರಂದು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನಲ್ಲಿ ನಡೆದ ಹಿಂದಿ ಹೇರಿಕೆ ಕೈಪಿಡಿಯ ಬಿಡುಗಡೆ ಮತ್ತು ಹಿಂದಿ ಹೇರಿಕೆಯ ಹಲವು ಮುಖಗಳ ಬಗ್ಗೆ ನಡೆದ ಚಿತ್ರ ಪ್ರದರ್ಶನ ಕಾರ್ಯಕ್ರಮದ ಕೆಲವು ಚಿತ್ರಗಳು.

ಹಿಂದಿ ಹೇರಿಕೆಯ ಹಲವು ಮುಖಗಳ ಬಗ್ಗೆ ನಡೆದ ಚಿತ್ರ ಪ್ರದರ್ಶನವನ್ನು ಉದ್ಘಾಟಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡರು.

Anand_TAN

ಗಣ್ಯರಿಗೆ ಪ್ರದರ್ಶನವನ್ನು ವಿವರಿಸುತ್ತಿರುವ ಬನವಾಸಿ ಬಳಗದ ಅಧ್ಯಕ್ಷರಾದ ಆನಂದ್

book_release

ಹಿಂದಿ ಹೇರಿಕೆ : ಮೂರು ಮಂತ್ರ ನೂರು ತಂತ್ರ ಕೈಪಿಡಿಯನ್ನು ಬಿಡುಗಡೆಗೊಳಿಸುತ್ತಿರುವ ಗಣ್ಯರು.

crowd

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು