Category Archives: ಪಿಟಿಶನ್

ಸಹಿ ಮಾಡಿ – ಸರಿ ಮಾಡಿ

ಗೆಳೆಯರೇ,
ಭಾರತದ ಭಾಷಾ ನೀತಿ ಹಿಂದಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಕನ್ನಡವೂ ಸೇರಿದಂತೆ ಇತರೆ ಭಾಷೆಗಳಿಗೆ ಹಿಂದಿಗೆ ಕೊಡಲಾಗಿರುವ ಸ್ಥಾನಮಾನ ಕೊಟ್ಟಿಲ್ಲ. ಇವತ್ತು ಅಂಚೆ ಕಚೇರಿಗಳಲ್ಲಿ , ರೈಲುಗಳಲ್ಲಿ, ಬ್ಯಾಂಕುಗಳಲ್ಲಿ, ಅಡುಗೆ ಸಿಲಿಂಡರ್ ಗಳ ಮೇಲೆ ಹೀಗೆ ಹತ್ತು ಹಲವು ಕಡೆ ಕರ್ನಾಟಕದಲ್ಲೇ ಕನ್ನಡದಲ್ಲಿ ಸೇವೆ ಸಿಗುವುದಿಲ್ಲ. ಆದರೆ ಹಿಂದಿಯಲ್ಲಿ ಸೇವೆ ಸಿಗುತ್ತದೆ.
ಇದನ್ನು ಸರಿಪಡಿಸಲು ಹಾಗೂ ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಲು ಪ್ರಧಾನ ಮಂತ್ರಿಗಳನ್ನು ಉದ್ದೇಶಿಸಿ ಈ ಪಿಟಿಷನ್ ಅನ್ನು ಮಾಡಲಾಗಿದೆ. ನೀವೂ ಸಹಿ ಹಾಕಿ, ನಿಮ್ಮ ಗೆಳೆಯರಿಗೂ ಸಹಿ ಮಾಡಲು ಹೇಳಿ . ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳಿಗೆ ಸಮಾನ ಸ್ಥಾನ ಸಿಗಬೇಕು ಎಂದು ದನಿಗೂಡಿಸಿ

ಎಲ್ಲಾ ಭಾಷಾ ವೈವಿಧ್ಯತೆಗಳಿಗೆ ಸಮಾನ ಗೌರವ ತರುವ ಭಾಷಾನೀತಿಯನ್ನು ಭಾರತದ ಸಂಸತ್ತು ರೂಪಿಸಲಿ

ಇಂದಿನ ಭಾರತದ ತೊಡಕಿನ ಭಾಷಾನೀತಿಯನ್ನು ಕೈಬಿಡಬೇಕು. ಸಂವಿಧಾನಾತ್ಮಕವಾಗಿ ಹಿಂದೀ ಹೇರಿಕೆಯನ್ನು ಮಾಡುವುದನ್ನು ನಿಲ್ಲಿಸಬೇಕು. ಎಲ್ಲಾ ಭಾಷಾ ವೈವಿಧ್ಯತೆಗಳಿಗೆ ಸಮಾನ ಗೌರವ ತರುವ ಭಾಷಾನೀತಿಯನ್ನು ಭಾರತದ ಸಂಸತ್ತು ರೂಪಿಸಬೇಕೆಂದು ಎಂದು ಒತ್ತಾಯಿಸುತ್ತಾ 2012ರ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಾದ ಪಿಟಿಶನ್.

ಈ ಪಿಟಿಶನ್ನಿನ ಕೊಂಡಿ ಇಲ್ಲಿದೆ.

ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಎಲ್ಲಾ ಭಾಷಿಕರಿಗೆ ಸಮಾನ ಅವಕಾಶಕ್ಕಾಗಿ ಒತ್ತಾಯ

 

ಕೇಂದ್ರ ಲೋಕಸೇವಾ ಆಯೋಗವು ತಾನು ನಡೆಸುವ ಪರೀಕ್ಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವು ಎಲ್ಲಾ ಭಾಷೆಗಳಲ್ಲಿ ನಡೆಸಬೇಕು. ತನ್ಮೂಲಕ ಎಲ್ಲಾ ಭಾಷೆಗಳನ್ನು ಸಮಾನ ಮನೋಧರ್ಮದಿಂದ ನೋಡುತ್ತಾ ಎಲ್ಲಾ ಭಾಷಿಕ ಸಮುದಾಯಕ್ಕೂ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಸಮಾನ ಅವಕಾಶಗಳನ್ನು ಒದಗಿಸಿಕೊಡಬೇಕು. ಎಂದು ಒತ್ತಾಯಿಸುತ್ತಾ 2013ರ ಮಾರ್ಚ್ ತಿಂಗಳಲ್ಲಿ ನಡೆಸಲಾದ ಪಿಟಿಶನ್.

UPSC

ನಮ್ಮ ದೇಶದ ಇತರ ರಾಜ್ಯಗಳಲ್ಲಿಯೂ ಸಹ ಇದೇ ರೀತಿಯ ಹೋರಾಟಗಳು ನಡೆದಿದ್ದವು, ಕೊನೆಗೆ ಕೇಂದ್ರ ಸರ್ಕಾರವು ಯುಪಿಎಸ್ಸಿ ಪರೀಕ್ಷೆಗಳಿಗೆ ಮಾಡಿದ್ದ ತಿದ್ದುಪಡಿಗಳನ್ನು ಕೈಬಿಟ್ಟಿತು.

ಈ ಪಿಟಿಶನ್ನಿನ ಕೊಂಡಿ ಇಲ್ಲಿದೆ.

ಭಾಷಾ ಅಸಮಾನತೆಯನ್ನು ಹೋಗಲಾಡಿಸಲು ಕೈಜೋಡಿಸುವಂತೆ 2013 ಸೆಪ್ಟೆಂಬರಿನಲ್ಲಿ ನಡೆಸಲಾದ ಪಿಟಿಷನ್.

ನಿಜಕ್ಕೂ ನಮ್ಮನ್ನು ಸಮಾನವಾಗಿ ಕಾಣಲಾಗುತ್ತಿದೆಯೇ ? ಎಲ್ಲಾ ನುಡಿಗಳನ್ನೂ ಸಮಾನವಾಗಿ ಕಾಣಲಾಗುತ್ತಿದೆಯೇ ?
ಭಾಷಾ ಅಸಮಾನತೆಯನ್ನು ಹೋಗಲಾಡಿಸಲು ಕೈಜೋಡಿಸುವಂತೆ 2013 ಸೆಪ್ಟೆಂಬರಿನಲ್ಲಿ ನಡೆಸಲಾದ ಪಿಟಿಷನ್.

petition

೧೯೫೦ರ ಸಂವಿಧಾನದಲ್ಲಿ ಭಾರತದ ಅಧಿಕೃತ ಆಡಳಿತ ಭಾಷೆಯ ಪಟ್ಟವನ್ನು ಹಿಂದಿ/ ಇಂಗ್ಲೀಶ್ ಭಾಷೆಗಳಿಗೆ ಮಾತ್ರಾ ನೀಡುವ ಮೂಲಕ ಹಿಂದಿ ಭಾಷೆಗೆ ಉಳಿದೆಲ್ಲಾ ಭಾರತೀಯ ಭಾಷೆಗಳಿಗಿಂತಲೂ ಹೆಚ್ಚಿನ ಸ್ಥಾನ ನೀಡಲಾಗಿದೆ. ಇದರಿಂದಾಗಿ ಹಿಂದಿಯೇತರ ಭಾಷೆಗಳ ಬಗ್ಗೆ ತಾರತಮ್ಯದ ಧೋರಣೆಯನ್ನು ತೋರಲಾಗುತ್ತಿದೆ. ಕೇಂದ್ರಸರ್ಕಾರಿ ಕಚೇರಿಗಳಲ್ಲಿನ ಆಡಳಿತದಲ್ಲಿ ಈ ಎರಡೇ ನುಡಿಗಳನ್ನು ಬಳಸಲಾಗುತ್ತಿದ್ದು ಕನ್ನಡದಂತಹ ನುಡಿಗಳು ಬಳಕೆಯಲ್ಲಿಲ್ಲವಾಗಿವೆ. ಕರ್ನಾಟಕದಲ್ಲಿರುವ ಕೇಂದ್ರಸರ್ಕಾರಿ ಅಧೀನದ ಇಲಾಖೆಗಳಾದ ಅಂಚೆ, ವಿಮೆ, ರೈಲ್ವೆ, ವಿಮಾನ ನಿಲ್ದಾಣ, ಪಾಸ್‌ಪೋರ್ಟ್, ಬ್ಯಾಂಕು, ಪಿಂಚಣಿ ಹೀಗೆ ಎಲ್ಲ ಕಡೆ ಸರಿಯಾಗಿ ಕನ್ನಡವಿರದೆ, ಕನ್ನಡಿಗರು ಕರ್ನಾಟಕದಲ್ಲೇ ಎರಡನೆಯ ದರ್ಜೆಯ ಪ್ರಜೆಗಳಂತಾಗಿದ್ದಾರೆ. ಇಂತಹದೊಂದು ಸ್ಥಿತಿಗೆ ಭಾರತದ ಭಾಷಾನೀತಿಯೇ ಕಾರಣವಾಗಿದೆ. ಶಾಲಾ ಹಂತದಿಂದಲೇ, ಹಿಂದಿ ಭಾಷಿಕ ಪ್ರದೇಶಗಳಿಗೆ ಅನ್ವಯವಾಗದ ತ್ರಿಭಾಷಾಸೂತ್ರವನ್ನು ಬಳಸಿ, ನಮ್ಮ ಮಕ್ಕಳ ಮೇಲೆ ಹಿಂದಿಯನ್ನು ಕಡ್ಡಾಯವಾಗಿ ಹೇರಲಾಗುತ್ತಿದೆ. ಭಾರತದಂತಹ ವೈವಿಧ್ಯತೆಯ ನಾಡಿನಲ್ಲಿ ಇಂತಹ ತಾರತಮ್ಯವು ಒಡಕಿಗೆ ಕಾರಣವಾಗಲಿದೆ ಎನ್ನುವ ಆತಂಕದಿಂದ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ.

ಭಾರತದ ಸಂವಿಧಾನದಲ್ಲಿ ಭಾಷಾ ನೀತಿಯ ಬಗ್ಗೆ ಬರೆಯಲಾದ ವಿಧಿಗಳನ್ನು ಪುನರ್ ಪರಿಶೀಲಿಸಿ ಇವತ್ತಿನ ಹುಳುಕಿನ ಭಾಷಾನೀತಿಯನ್ನು ಕೈಬಿಟ್ಟು ಸಮಾನ ಗೌರವದ, ಸಮಾನ ಅವಕಾಶದ ಹೊಸದೊಂದು ಭಾಷಾನೀತಿಯನ್ನು ಭಾರತ ಸರ್ಕಾರ ಅಳವಡಿಸಿಕೊಳ್ಳುವಂತೆ ಕರ್ನಾಟಕ ರಾಜ್ಯಸರ್ಕಾರವು ಸೂಕ್ತವಾದ ವೇದಿಕೆಗಳಲ್ಲಿ ದನಿ ಎತ್ತಬೇಕೆಂದು ಕೋರುತ್ತೇವೆ. ವೈವಿಧ್ಯತೆಗೆ ಕೊಡಲಿ ಪೆಟ್ಟಿನಂತೆ ಕಾಣಿಸುವ ಸೆಪ್ಟೆಂಬರ್ ೧೪ರ “ಹಿಂದಿ ದಿವಸ್”ನಂತಹ ಆಚರಣೆಗಳನ್ನು ಕೈಬಿಟ್ಟು ಈಗಿನ ಭಾಷಾನೀತಿಯನ್ನು ಬದಲಿಸಿಕೊಳ್ಳಲು ಕೇಂದ್ರದ ಮೇಲೆ ಒತ್ತಡ ಹೇರುವ ಕ್ರಮವನ್ನು ತಾವು ಕೈಗೊಳ್ಳಬೇಕೆಂದು ನಾವುಗಳು ಆಗ್ರಹಿಸುತ್ತೇವೆ.

ಇದಕ್ಕೆ ಎರಡು ವಾರಗಳಲ್ಲಿ 2411 ಮಂದಿ ಸಹಿ ಮಾಡಿ ಬೆಂಬಲ ಸೂಚಿಸಿದ್ದಾರೆ ,ಈ ಪಿಟಿಷನ್‌ಗೆ ಕೊಂಡಿ ಇಲ್ಲಿದ