Category Archives: ಲೇಖನಗಳು

ಬಲಿಷ್ಠ ಭಾರತ ಕಟ್ಟಲು ಹಿಂದಿಯೊಂದರಿಂದ ಮಾತ್ರ ಸಾಧ್ಯವೆ? – ಚೇತನ್ ಜೀರಾಳ್ ಅವರ ಅಂಕಣ ಕನ್ನಡಪ್ರಭದಲ್ಲಿ.

ಬಲಿಷ್ಠ ಭಾರತ ಕಟ್ಟಲು ಹಿಂದಿಯೊಂದರಿಂದ ಮಾತ್ರ ಸಾಧ್ಯವೆ?

chethan_kp

ಹಿಂದಿ ಹೇರಿಕೆಗೆ ಇದೆ ಒಂದು ಇತಿಹಾಸ:ಬರಗೂರು ರಾಮಚಂದ್ರಪ್ಪ

ಹಿಂದಿಯೇತರರ ಮೇಲೆ ಹಿಂದಿ ಹೇರಿಕೆಗಿರುವ ಇತಿಹಾಸ ಮತ್ತು ಅದನ್ನು ಹೇಗೆ ಸಂವಿಧಾನಬದ್ದಗೊಳಿಸಿಕೊಂಡು ವ್ಯವಸ್ಥಿತವಾಗಿ ಹೇರಲಾಗುತ್ತಿದೆ ಮತ್ತು ಈ ಹೇರಿಕೆ ಹೇಗೆ ಅನೇಕತೆಯಿಂದ ಏಕತೆಯ ಕಡೆಗೆ ಮುಖಮಾಡುವ ಪ್ರಕ್ರಿಯೆಯಾಗಿದೆ ಎಂದು ವಿವರಿಸುತ್ತಾ ಪ್ರಜಾವಾಣಿಯಲ್ಲಿ ಮೂಡಿ ಬಂದಿರುವ ಬರಗೂರು ರಾಮಚಂದ್ರಪ್ಪನವರ ಬರಹ.

baragooru

ಹಿಂದಿ ಹೇರಿಕೆ : ಸಂವಿಧಾನವೇ ಹುಳುಕನ್ನು ಪೊರೆದಿರುವಾಗ

ಹಿಂದಿ ಹೇರಿಕೆ : ಸಂವಿಧಾನವೇ ಹುಳುಕನ್ನು ಪೊರೆದಿರುವಾಗ

“ಹಿಂದಿಯನ್ನು ಎಲ್ಲೆಡೆ ಹರಡುವ ಆ ಮೂಲಕ ಹಿಂದಿ ಭಾಷಿಕರಿಗೆ ದೇಶದ ಯಾವಮೂಲೆಯಲ್ಲೂ ಯಾವ ತೊಡಕೂ ಆಗದಂತೆ ಎಚ್ಚರ ವಹಿಸುವ ತಾರತಮ್ಯ ತೋರುವ ಮೂಲಕ ಭಾರತ ಏಕತೆಯನ್ನು ಕಟ್ಟಲು ಸಾಧ್ಯವಿಲ್ಲ. ವಾಸ್ತವವಾಗಿ ಇದು ದೇಶದ ಒಡಕಿಗೇ ಕಾರಣವಾದೀತು! ”

ದಟ್ಸ್ ಕನ್ನಡದಲ್ಲಿ ಮೂಡಿ ಬಂದಿರುವ ಆನಂದ್‍ರವರ ಬರಹ, ಮುಂದೆ ಓದಿ.

ಭಾಷಾ ವೈವಿಧ್ಯ ಉಳಿಸಿಕೊಳ್ಳಿ:ವಿಜಯಕರ್ನಾಟಕ ಸಂಪಾದಕೀಯ

ಹಿಂದಿಹೇರಿಕೆ ವಿರೋಧಿಸಿ ವಿಜಯಕರ್ನಾಟಕ ಪತ್ರಿಕೆಯಲ್ಲಿ ಬಂದಿರುವ ಸಂಪಾದಕೀಯ

.vk_editorial

ಹೇರಿಕೆ ಸರಿಯಲ್ಲ – ಪ್ರಜಾವಾಣಿ ಸಂಪಾದಕೀಯ

“ಗುಜರಾತಿ ಭಾಷಿಕ ಪ್ರಧಾನಿಯ ಆಡಳಿತದಲ್ಲಿಯೇ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಸವಾರಿಗೆ ಉತ್ತೇಜನ ಕೊಡುವ ಈ ನೀತಿ ಎಳ್ಳಷ್ಟೂ ಸರಿಯಲ್ಲ. ಏಕೆಂದರೆ ಸಂವಿಧಾನದಲ್ಲಿ ಹಿಂದಿಗೆ ವಿಶೇಷ ಸ್ಥಾನಮಾನವೇನೂ ಇಲ್ಲ.  ಕನ್ನಡ, ತಮಿಳು, ಅಸ್ಸಾಮಿ ಹೀಗೆ ಇತರೆಲ್ಲ ಅಧಿಕೃತ ಭಾರತೀಯ ಭಾಷೆಗಳಂತೆ ಅದೂ ಒಂದು ಭಾಷೆಯಷ್ಟೆ…” – ಪ್ರಜಾವಾಣಿಯಲ್ಲಿ ಮೂಡಿಬಂದಿರುವ ಸಂಪಾದಕೀಯ ಇಲ್ಲಿ ಓದಿ.

ಎಲ್ಲಾ 22 ಭಾಷೆಗಳೂ ಅಧಿಕೃತವಾದರೆ ಮಾತ್ರ ಭಾರತ ಬಲಗೊಳ್ಳಲು ಸಾಧ್ಯ

ಎಲ್ಲಾ 22 ಭಾಷೆಗಳೂ ಅಧಿಕೃತವಾದರೆ ಮಾತ್ರ ಭಾರತ ಬಲಗೊಳ್ಳಲು ಸಾಧ್ಯ – ಉದಯವಾಣಿಯ ‘ಕನ್ನಡ ಜಗತ್ತು’ ಅಂಕಣದಲ್ಲಿ ಮೂಡಿ ಬಂದಿರುವ ವಸಂತ್ ಶೆಟ್ಟಿ ಅವರ ಬರಹ

ಯೂರೋಪಿಯನ್ ಸಂಸತ್ತಿನಲ್ಲಿ 23 ಭಾಷೆಗಳಿಗೆ ಮಾನ್ಯತೆಯಿದೆ. ಒಂದು ಭಾಷೆಯಲ್ಲಿ ಮಾತನಾಡಿದರೆ ಈ 23 ಭಾಷೆಗಳಲ್ಲೂ ಅನುವಾದವಾಗುತ್ತದೆ. ಭಾರತದಲ್ಲಿ ಇದೇಕೆ ಸಾಧ್ಯವಿಲ್ಲ? ಭಾರತದಲ್ಲಿ ಯೂರೋಪಿಗಿಂತಲೂ ಹೆಚ್ಚಿನ ವೈವಿಧ್ಯತೆ ಇದೆ. ಈ ವೈವಿಧ್ಯತೆ ಉಳಿಯಬೇಕು, ಬೆಳೆಯಬೇಕು ಎಂದರೆ ಅದನ್ನು ಸಾಧ್ಯವಾಗಿಸುವ ಭಾಷಾನೀತಿ ಭಾರತಕ್ಕೆ ಬೇಕು. ಆ ದಿಕ್ಕಿನಲ್ಲಿ ಭಾರತದ ಭಾಶಾನೀತಿಗೆ ತಿದ್ದುಪಡಿ ತಂದು ಸಂವಿದಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲಾ 22 ನುಡಿಗಳಿಗೂ ಅಧಿಕೃತ ಭಾಷೆಯ ಸ್ಥಾನಮಾನ ಕಲ್ಪಿಸಿ ಎಲ್ಲಾ ಭಾಷಿಕರಿಗೂ ಸಮಾನ ಅವಕಾಶ, ಸಮಾನ ಗೌರವ ಕಲ್ಪಿಸುವ ಕೆಲಸ ಆದ್ಯತೆಯ ಮೇಲಾಗಬೇಕು.

adhikruta

ಘಟನೆ ನಾಲ್ಕು ಆದರೆ ಸಮಸ್ಯೆ ಒಂದೇ..ಭಾರತಕ್ಕೆ ಬೇಕು ಹೊಸ ಭಾಷಾ ನೀತಿ

ಘಟನೆ ನಾಲ್ಕು ಆದರೆ ಸಮಸ್ಯೆ ಒಂದೇ..ಭಾರತಕ್ಕೆ ಬೇಕು ಹೊಸ ಭಾಷಾ ನೀತಿ – ಜನವರಿ 3ರ ಉದಯವಾಣಿಯ ‘ಕನ್ನಡ ಜಗತ್ತು’ ಅಂಕಣದಲ್ಲಿ ಮೂಡಿ ಬಂದಿರುವ ವಸಂತ್ ಶೆಟ್ಟಿ ಅವರ ಬರಹ

ಘಟನೆ ಒಂದು: ಅದು ದಕ್ಷಿಣ ಬೆಂಗಳೂರಿನ ಕೆಳ ಮಧ್ಯಮ ವರ್ಗದವರೇ ಹೆಚ್ಚಿರುವ ಭಾಗದಲ್ಲಿನ ಸರ್ಕಾರಿ ಬ್ಯಾಂಕೊಂದರ ಶಾಖೆ. ಅಲ್ಲಿ ಆಧಾರ್ ಕಾರ್ಡ್ ಬಳಸಿ ಮನೆ ಬಳಸುವ ಗ್ಯಾಸ್ ಮೇಲಿನ ಸಬ್ಸಿಡಿ ಹಣ ಪಡೆಯುವ ವಿವರ ಸರಿಯಾಗಿ ತಿಳಿಯದೇ ಬ್ಯಾಂಕ್ ಸಿಬ್ಬಂದಿಗೆ ಮನವಿ ಮಾಡುತ್ತಿದ್ದ ನಾಲ್ಕಾರು ಪೆಚ್ಚುಮೊರೆಯ ಹೆಂಗಳೆಯರು. ಬ್ಯಾಂಕ್ ಮ್ಯಾನೆಜರ್ ಅನ್ನು ವಿಚಾರಿಸಿದಾಗ ಅವರು ತಿಳಿಸಿದ್ದು: ಇಷ್ಟು ದಿನ ನಾನೂರು ಚಿಲ್ಲರೆ ಹಣ ಕೊಟ್ಟು ಮನೆಯಲ್ಲೇ ಗ್ಯಾಸ್ ಸಿಲಿಂಡರ್ ಪಡೆಯುತ್ತಿದ್ದ ಈ ಹೆಂಗಳೆಯರಿಗೆ ಈಗ ಮಾರುಕಟ್ಟೆ ದರವಾದ ಎಂಟು ನೂರು ಕೊಟ್ಟು ಉಳಿದ ನಾನೂರು ಸಬ್ಸಿಡಿ ಮೊತ್ತ ಪಡೆಯಲು ಬ್ಯಾಂಕಿಗೆ ಬರಬೇಕಾದ ಸ್ಥಿತಿ ಬಂದಿದೆ. ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಬಂದಾಗ ಮೊಬೈಲ್ ಅಲ್ಲಿ ಒಂದು ಸಂದೇಶ ಬರುತ್ತೆ. ಆನಂತರ ಬ್ಯಾಂಕಿನಲ್ಲಿ ಅದನ್ನು ಪಡೆಯಲು ಹಣ ಪಡೆಯುವ ಚೀಟಿ ತುಂಬಿ ಕೊಡಬೇಕು. ಇಲ್ಲಿ ಸಮಸ್ಯೆ ಎಲ್ಲಿದೆಯೆಂದರೆ ಮೊಬೈಲಿಗೆ ಬರುವ ಸಂದೇಶ ಇಂಗ್ಲಿಷಿನಲ್ಲಿದ್ದರೆ, ಬ್ಯಾಂಕಿನ ಬರೆವ ವ್ಯವಹಾರವೆಲ್ಲ ಇಂಗ್ಲಿಶ್/ಹಿಂದಿಗೆ ಸೀಮಿತವಾಗಿದೆ. ಇವೆರಡೂ ಬಾರದೇ ಕನ್ನಡವೊಂದೇ ಬಲ್ಲ ಗ್ರಹಿಣಿಯರು ನೆರವಿಗಾಗಿ ಬ್ಯಾಂಕಿನಲ್ಲಿ ಅಲೆದಾಡುವ ಸ್ಥಿತಿ ಬಂದಿದೆ. ಮೊಬೈಲ್, ಆಧಾರ್ ಕಾರ್ಡಿನಂತಹ ಯಾವ ಹೊಸ ವಿಧಾನಗಳು ಬದುಕನ್ನು ಸುಲಭ ಮಾಡಬೇಕಿದ್ದವೋ ಅವು ಭಾಷೆಯ ತಡೆಗೋಡೆಯಿಂದಾಗಿ ಸಾಮಾನ್ಯ ಕನ್ನಡಿಗರಿಗೆ ಇನ್ನಷ್ಟು ತೊಂದರೆಯಂಟು ಮಾಡುವ ವಿಷಯಗಳಾಗಿವೆ!….ಮುಂದೆ ಓದಿ

bhashaneeti_vasant

 

ಹಿಂದೀ ಪ್ರಚಾರ ಸಭೆಗಳು ಬೇಕಾ?

ಹಿಂದೀ ಪ್ರಚಾರ ಸಭೆಗಳು ಬೇಕಾ?

ನಮ್ಮೂರಲ್ಲಿ ನಾವು ಪರಭಾಷೆಯೋರ ಜೊತೆ ಹಿಂದಿ ಬಳುಸ್ಬೇಕಂತೆ. ಪರಭಾಷಿಕರು ಅಂದ್ರೆ ತಮಿಳರು, ತೆಲುಗರು, ಮಲಯಾಳಿಗಳು, ಮರಾಠಿಗರು, ಬೆಂಗಾಲಿಗಳು, ಪಂಜಾಬಿಗಳು, ಗುಜರಾತಿಗಳೂ…ಸೇರಿದ ಹಾಗೆ ಎಲ್ಲಾ ಭಾಷೆ ಮಾತಾಡೋರೂ ಅಂತಾ ಅರ್ಥ. ಆಕಸ್ಮಾತ್ ನಾವು ಬಂದೋರ ಜೊತೇಲೆಲ್ಲಾ ಹಿಂದೀ ಬಳುಸಕ್ ಶುರು ಹಚ್ಕೊಂಡ್ರೆ ನಮ್ಮ ನಾಡಲ್ಲಿ ನಮ್ಮ ನುಡಿ ಉಳಿದೀತಾ ಗುರು? ಅದರ್ ಬದ್ಲು ಇವ್ರುಗಳು ‘ಕನ್ನಡನಾಡಿಗೆ ಬಂದೋರೆಲ್ಲಾ ತಮ್ಮ ತಾಯ್ನುಡೀನಾ ಮನೇಲಿ ಬಿಟ್ಟು ಕನ್ನಡದಲ್ಲೇ ವ್ಯವಹರುಸ್ಬೇಕು‘ ಅನ್ನಬೇಕಿತ್ತಲ್ವಾ?
ಈ ಜನಗಳ ಇನ್ನೊಂದು ಟ್ರಿಕ್ಕು ಇಂಗ್ಲಿಷ್ ಭಾಷೇ ನಮ್ಮನ್ನು ಗುಲಾಮರಾಗಿ ಮಾಡಿಕೊಂಡಿದ್ದ ಬ್ರಿಟೀಷರ ಭಾಷೆ. ಅದನ್ನು ಬಳುಸೋದು ಗುಲಾಮಗಿರಿ ಸಂಕೇತ ಅನ್ನೋ ಧ್ವನೀಲಿ ಮಾತಾಡೋದು. ಆ ಮೂಲಕ ಇವರೇನು ಕನ್ನಡ ಬಳಸಿ ಅಂತಿಲ್ಲಾ… ‘ಇಂಗ್ಲಿಷ್ ಬ್ಯಾಡಾ ಹಿಂದೀ ಬಳಸಿ’ ಅಂತಿದಾರೆ. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ ಅನ್ನೋ ಸಂಸ್ಥೇ ಮೂಲಕ ಈ ಪ್ರಚಾರದ ಕೆಲಸಕ್ಕೆ ಮುಂದಾಗಿದಾರೆ. ಇಂಥಾ ಪ್ರಚಾರಗಳ ಪೊಳ್ಳುತನ, ಅದರಿಂದಾಗೋ ಅಪಾಯಗಳ್ನ ನಾಡಿನ ಜನತೆ ಅರ್ಥ ಮಾಡ್ಕೋಬೇಕಾಗಿದೆ. ಅದು ಅಂಥಾ ಕಷ್ಟದ್ ಕೆಲ್ಸಾನೂ ಅಲ್ಲಾ ಗುರೂ! ಸುಮ್ನೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಲಾಂಛನದಲ್ಲಿ ಬರೆದಿರೋ ಸಾಲುಗಳನ್ನು ಓದಿಕೊಂಡ್ರೆ ಸಾಕು. ಅದರಲ್ಲೇನಿದೆ ಅಂದ್ರಾ… ” ಏಕ್ ರಾಷ್ಟ್ರಭಾಷಾ ಹಿಂದೀ ಹೋ! ಏಕ್ ಹೃದಯ್ ಹೋ ಭಾರತ್ ಜನನಿ ” ಅಂತಾ ಇದೆ. ಇದರರ್ಥ ಹಿಂದಿ ಅಲ್ಲದ ನುಡಿಗಳಿಗೆಲ್ಲಾ ಭಾರತದಲ್ಲಿ ಜಾಗಾ ಇಲ್ಲಾ ಅಂತ ಇದ್ದಂಗಿಲ್ವಾ? ಗುರೂ!! ಮುಂದೆ ಓದಿ

ಹಿಂದೀ ಹೇರಿಕೆಗೆ ಬ್ಯಾಂಕುಗಳನ್ನೂ ಬಿಡದೆ ಬಳಸಿಕೊಳ್ಳೋ ಭಾರತ ಸರ್ಕಾರ!

ಹಿಂದೀ ಹೇರಿಕೆಗೆ ಬ್ಯಾಂಕುಗಳನ್ನೂ ಬಿಡದೆ ಬಳಸಿಕೊಳ್ಳೋ ಭಾರತ ಸರ್ಕಾರ!

ಹೀಗೆ ಹಿಂದೀ ದಿವಸ್ ಎನ್ನುವ ಆಚರಣೆಗೂ, ಬ್ಯಾಂಕುಗಳೆಂಬ ಹಣಕಾಸು ವಹಿವಾಟಿನ ಉದ್ದೇಶದ ಸಂಸ್ಥೆಗಳಿಗೂ ಏನು ಸಂಬಂಧವೆನ್ನುವ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಬ್ಯಾಂಕುಗಳು ರಾಷ್ಟ್ರೀಕರಣವಾದ ಮೇಲೆ ಅವು ಕೇಂದ್ರಸರ್ಕಾರಿ ಉದ್ದಿಮೆಗಳಾದ ನಂತರ, ಅಲ್ಲಿಯೂ ಭಾರತದ ಭಾಷಾನೀತಿಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತದೆ, ರಾಜ್‌ಭಾಷಾ ಇಲಾಖೆ. ಅಂತೆಯೇ ನಿಮ್ಮ ಗ್ರಾಹಕರನ್ನು ಹಿಂದೀಯಲ್ಲಿ ವ್ಯವಹರಿಸಲು ಉತ್ತೇಜಿಸಿ ಎನ್ನುತ್ತಾ ಹಿಂದೀ ಪ್ರಚಾರ ಮಾಡುವ ಬ್ಯಾಂಕಿಗೆ ಪ್ರಶಸ್ತಿಯನ್ನು ಕೊಡುತ್ತದೆ. ಹೀಗೆಲ್ಲಾ ಮಾಡೋದಕ್ಕೆ ಮುಖ್ಯ ಕಾರಣ ಭಾರತೀಯರೆಲ್ಲಾ, ಅವರು ಯಾವುದೇ ಭಾಷೆಯವರಾದರೂ ಒಂದಲ್ಲಾ ಒಂದು ದಿವಸ, ಯಾವುದಾದರೂ ಬ್ಯಾಂಕಿಗೆ, ಯಾವುದಾದರೂ ಕೆಲಸಕ್ಕೆ ಬರಲೇಬೇಕು. ಆಗಾದರೂ ಅವರಿಗೆ ಹಿಂದೀಯನ್ನು ಕಲಿಸೋಣ ಎನ್ನುವ ದೂರದ ದುರಾಲೋಚನೆಯೇ ಎನ್ನಿಸುತ್ತದೆ. ಮುಂದೆ ಓದಿ

ಹಿಂದಿಯೇತರ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರದ ಅವಶ್ಯಕತೆಯಾದರು ಏನಿದೆ?

> ಅಡುಗೆ ಅನಿಲದ ಸಿಲಿಂಡರ್-ನಲ್ಲಿ ಸುರಕ್ಷತೆ ಮಾಹಿತಿ ಹಿಂದಿಯಲ್ಲಿರುತ್ತದೆ 
> ಕರ್ನಾಟಕದ ಒಳಗಡೆ ಪ್ರಯಾಣಿಸುವ ರೈಲುಗಳಲ್ಲಿ ಹಿಂದಿಯಲ್ಲಿ ಮಾಹಿತಿ
> ಬ್ಯಾಂಕು/ಅಂಚೆ ಕಚೇರಿಗಳಲ್ಲಿ ಚಲನ್-ಗಳು,ಮಾಹಿತಿ ಪತ್ರಗಳು ಇಂಗ್ಲಿಷ್,ಹಿಂದಿಯಲ್ಲಿ
> ಎಲ್.ಐ.ಸಿ ಬಾಂಡುಗಳ ವಿವರಣೆ, ಪಾಲಿಸಿಯ ಹೆಸರು, ಜಾಹೀರಾತುಗಳು ಹಿಂದಿಯಲ್ಲಿ
> ಮೆಟ್ರೋ ದಲ್ಲಿ ಹಿಂದೀ ಹೇರಿಕೆ…

ಹಿಂದಿಯೇತರ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರದ ಅವಶ್ಯಕತೆಯಾದರು ಏನಿದೆ? – ಜಯಂತ್ ಸಿದ್ಮಲ್ಲಪ್ಪ ಅವರ ಬರಹ ದಟ್ಸ್ ಕನ್ನಡದಲ್ಲಿ.