Category Archives: ವೀಡಿಯೋಗಳು

ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ

ಜನವರಿ 24, 2016 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ “ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ – ಒಂದು ಚಿತ್ರಪ್ರದರ್ಶನ” ಕಾರ್ಯಕ್ರಮ ಏರ್ಪಡಿಸಲಾಗಿತ್ತು . ಚಿತ್ರಪ್ರದರ್ಶನಕ್ಕೆ ಹಲವಾರು ಜನರು ಭೇಟಿ ಕೊಟ್ಟು, ಸಮಾನತೆಯ ಭಾಷಾನೀತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ, ಸಮಾನತೆಯ ಭಾಷಾನೀತಿಗಾಗಿ ಒತ್ತಾಯಿಸುವ ಪತ್ರಕ್ಕೆ ಸಹಿ ಮಾಡುವ ಮೂಲಕ ತಮ್ಮ ಬೆಂಬಲವನ್ನು ತೋರ್ಪಡಿಸಿದರು. ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಣಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.

Advertisements

ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ

ಸೆಪ್ಟೆಂಬರ್ 13, 2015 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ “ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ – ಒಂದು ಚಿತ್ರಪ್ರದರ್ಶನ”ದ ವಿಡಿಯೋ ಇಲ್ಲಿದೆ. ಬನವಾಸಿ ಬಳಗ ಪ್ರಕಾಶನವು ಹೊರತಂದಿರುವ “ಹಿಂದೀ ಹೇರಿಕೆ – ಮೂರು ಮಂತ್ರ, ನೂರು ತಂತ್ರ” ಹೊತ್ತಗೆಯ ಬರಹಗಾರರಾದ ಶ್ರೀ ಆನಂದ್ ಅವರು ಚಿತ್ರಪ್ರದರ್ಶನವನ್ನು ಬಣ್ಣಿಸಿದ್ದಾರೆ.

ಚಿತ್ರಪ್ರದರ್ಶನಕ್ಕೆ ಹಲವಾರು ಜನರು ಭೇಟಿ ಕೊಟ್ಟು, ಸಮಾನತೆಯ ಭಾಷಾನೀತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ, ಸಮಾನತೆಯ ಭಾಷಾನೀತಿಗಾಗಿ ಒತ್ತಾಯಿಸುವ ಪತ್ರಕ್ಕೆ ಸಹಿ ಮಾಡುವ ಮೂಲಕ ತಮ್ಮ ಬೆಂಬಲವನ್ನು ತೋರ್ಪಡಿಸಿದರು. ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಣಗಳನ್ನು ಈ ಕೆಳಗಿನ ವಿಡಿಯೋಗಳಲ್ಲಿ  ನೋಡಬಹುದಾಗಿದೆ.

ಸಮಾನತೆಯ ಭಾಷಾನೀತಿ ಚಿತ್ರಪ್ರದರ್ಶನದ ಆಯ್ದ ಚಿತ್ರಣಗಳು – ತುಣುಕು 1

ಸಮಾನತೆಯ ಭಾಷಾನೀತಿ ಚಿತ್ರಪ್ರದರ್ಶನದ ಆಯ್ದ ಚಿತ್ರಣಗಳು – ತುಣುಕು 2

ಭಾರತಕ್ಕೊಪ್ಪುವ ಭಾಷಾನೀತಿ

14ನೇ ಸೆಪ್ಟೆಂಬರ್ 2013 ರ ಶನಿವಾರದಂದು ಸಂಜೆ 7 ಗಂಟೆಗೆ ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ನಡೆದ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ್ಯಕ್ರಮದಲ್ಲಿ “ಭಾರತಕ್ಕೊಪ್ಪುವ ಭಾಷಾನೀತಿ” ಅನ್ನುವ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ “ಹಿಂದೀ ಹೇರಿಕೆ – ಮೂರು ಮಂತ್ರ : ನೂರು ತಂತ್ರ” ಹೊತ್ತಗೆಯ ಲೇಖಕರಾದ ಶ್ರೀ ಜಿ.ಆನಂದ್ ಅವರು  ‘ಭಾರತಕ್ಕೊಪ್ಪುವ     ಭಾಷಾನೀತಿ’ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಭಾರತಕ್ಕೊಪ್ಪುವ ಭಾಷಾನೀತಿ – 1

ಭಾರತಕ್ಕೊಪ್ಪುವ ಭಾಷಾನೀತಿ – 2

ಭಾರತಕ್ಕೊಪ್ಪುವ ಭಾಷಾನೀತಿ – 3